ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಆರಂಭವಾಗಿದೆ, ಸ್ಪರ್ಧಿಗಳೆಲ್ಲರೂ ದೊಡ್ಡ ಮನೆಯೊಳಗೆ ಹೋಗಿದ್ದಾರೆ. ಆದರೆ ಬಿಗ್‌ ಬಾಸ್ ಆರಂಭವಾಗಿರೋದು ಕನ್ನಡದಲ್ಲಲ್ಲ, ಬದಲಾಗಿ ಹಿಂದಿಯಲ್ಲಿ. ಬಿಗ್ ಬಾಸ್ 14 ಆರಂಭವಾಗಿದ್ದು, ನಟ ಸಲ್ಮಾನ್ ಖಾನ್ ಎಂದಿನಂತೆ ಈ ಬಾರಿ ಕೂಡ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ, ನಿರ್ವಹಣೆ ಮಾಡಲಿದ್ದಾರೆ. ಈ ಬಾರಿ ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ ಸ್ಪಾ, ರೆಸ್ಟೋರೆಂಟ್, ಥಿಯೇಟರ್, ಮಾಲ್ ಕೂಡ ಇದೆ…!
ಅಂದಹಾಗೆ ಇದು ಕನ್ನಡದ ಬಿಗ್ ಬಾಸ್ ಅಲ್ಲ ಹಿಂದಿ ಬಿಗ್ ಬಾಸ್ ..!


ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಸ್ಪರ್ಧಿಗಳು 14 ದಿನ ಕ್ವಾರಂಟೈನ್ ಆಗಲಿದ್ದಾರೆ. ಇಡೀ ಬಿಗ್ ಬಾಸ್ ಮನೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿ ಯಾರೂ ಪ್ರೇಕ್ಷಕರು ಬಿಗ್ ಬಾಸ್ ನಡೆಯುವ ಸ್ಥಳದಲ್ಲಿ ಇರೋದಿಲ್ಲ. ಪ್ರೇಕ್ಷಕರಿಲ್ಲದೆ ನಿರೂಪಣೆ ಮಾಡೋದು ಖಾಲಿ ಅನಿಸುತ್ತದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಈ ಬಾರಿಯ ಸ್ಪರ್ಧಿಗಳ ವಿವರ :

ಜಾನ್ ಕುಮಾರ್ ಸಾನು-ಗಾಯಕ ಕುಮಾರ್ ಸಾನು ಪುತ್ರ

ರುಬೀನಾ ದಿಲೈಕ್-ಅಭಿನವ್ ಶುಕ್ಲಾ- ಇವರಿಬ್ಬರು ನಿಜ ಜೀವನದಲ್ಲಿಯೂ ಗಂಡ-ಹೆಂಡತಿ. ‘ಛೋಟಿ ಬಹು’ ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು.

ಪವಿತ್ರಾ ಪುನಿಯಾ: ಪಾರಸ್ ಛಬ್ರಾ ಜೊತೆ ರಿಲೇಶನ್‌ಶಿಪ್‌ನಲ್ಲಿರುವ ಪವಿತ್ರಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಈಜಾಜ್ ಖಾನ್- ಪ್ರಖ್ಯಾತ ಧಾರಾವಾಹಿ ನಟ

ನಿಕ್ಕಿ ತಂಬೋಲಿ-ತಮಿಳು, ತೆಲುಗು ಚಿತ್ರರಂಗದ ನಟಿ

ರಾಧೆ ಮಾ-ವಿವಾದಾತ್ಮಕ ಆಧ್ಯಾತ್ಮಿಕ ಗುರು

ಜಾಸ್ಮಿನ್ ಭಾಸಿನ್ -ನಾಗಿನ್ ಧಾರಾವಾಹಿ ನಟಿ

ರಾಹುಲ್ ವೈದ್ಯ-ಗಾಯಕ

ನಿಶಾಂತ್ ಸಿಂಗ್ ಮಲ್ಖಾನಿ-ನಟ

ಶೆಹಜಾದ್ ಡಿಯೋಲ್-ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ

#RPDBill ಮತ್ತು #Thalassemia

1.Thalasemia ... ವಿಚಿತ್ರ ಕಾಯಿಲೆ..
 ದೇಹದಲ್ಲಿರುವ ಹಿಮೋಗ್ಲೋಬಿನ್ ವಿಭಿನ್ನವಾದ ರೀತಿಯಲ್ಲಿ ಉತ್ಪಾದನೆಯಾಗುತ್ತದೆ ಮತ್ತು ಅಷ್ಟೇ ಶೀಘ್ರವಾಗಿ ನಾಶವಾಗುತ್ತದೆ. ಅಂತಹ ಮಕ್ಕಳಿಗೆ
 ಪ್ರತಿ ತಿಂಗಳಿಗೊಮ್ಮೆ ರಕ್ತ ನೀಡಬೇಕಾಗಿ ಬರುತ್ತದೆ. ಅವರ ದೇಹದಲ್ಲಿ ಕಬ್ಬಿಣದ ಅಂತ ಹೆಚ್ಚುತ್ತಾ ಹೋಗಿ ಅದು ದೇಹದ ಪ್ರಮುಖ ಅಂಗಾಗದ ಮೇಲೆ ದುಷ್ಪರಿಣಾಮವನ್ನು ಬೀರುತ್ತಾ ಒಟ್ಟು ಜೀವಿತಾವಧಿಯನ್ನು ಕುಗ್ಗಿಸುತ್ತದೆ. ಪ್ರತೀ ತಿಂಗಳು  ರಕ್ತ ಪಡೆಯದಿದ್ದರೆ ಮತ್ತು ದೇಹದಲ್ಲಿ ಹೆಚ್ಚುತ್ತಿರುವ ಕಬ್ಬಿಣದ ಅಂಶವನ್ನು ಔಷಧಿಗಳ ಮೂಲಕ ಕಡಿಮೆ ಮಾಡದಿದ್ದರೆ ರೋಗ ಉಲ್ಬಣವಾಗುತ್ತದೆ.  ಶಾಶ್ವತ ಪರಿಹಾರವಾದ ಬೋನ್ ಮ್ಯಾರೋ ಕ್ರಾನ್ಸಪ್ಲಾಂಟ್ ಎಲ್ಲರ ಕೈಗೆ ಎಟಕುವುದಿಲ್ಲ.

2. ಮಡಿಕೇರಿಯ ನಮ್ಮ  ಜಿಲ್ಲಾಸ್ಪತ್ರೆಯಲ್ಲಿ ಅನೇಕ‌ ಥ್ಯಾಲಸೀಮಿಯಾ ಮಕ್ಕಳು ಪ್ರತಿ ತಿಂಗಳು ರಕ್ತ ಪಡೆಯಲು ಬರುತ್ತಾರೆ. ಕೊರೊನಾ ಶುರುವಾಗುವ ಮೊದಲು ಮಂಗ್ಳೂರು ಮೈಸೂರಿಗೆ ಹೋಗುತ್ತಿರುವವರು ಈಗ ಇಲ್ಲಿಗೆ ಬರುವುದನ್ನು ನೋಡಿದ್ದೇನೆ. ಕರ್ನಾಟಕದಲ್ಲಿ ಅಂತಹ ಮಕ್ಕಳ ಸಂಖ್ಯೆ  ಆರು ಸಾವಿರದಷ್ಟಿದೆ. ಕೊಡಗಿನಲ್ಲಿ ನೂರಾರು ಜನರಿದ್ದಾರೆ ಮತ್ತು ಅವರೆಲ್ಲರು ಜಿಲ್ಲಾಸ್ಪತ್ರೆಗೆ ಬರುವುದಿಲ್ಲ.

3.The rights of people with disability (RPD) Bill ಲೋಕಸಭೆಯಲ್ಲಿ 14 ಡಿಸೆಂಬರ್ 2016ರಲ್ಲಿ ಪಾಸಾಗಿದೆ. ಮೊದಲು ಕೇವಲ ಏಳು ಕಾಯಿಲೆಗಳಿಗೆ ಇದು ಅನ್ವಯವಾಗುತ್ತಿತ್ತು. ಈಗ 21 ಕಾಯಿಲೆಗಳನ್ನು ಅದರಲ್ಲಿ ಸೇರಿಸಲಾಗಿದೆ.  ಆ ಬಿಲ್ಲಿನಲ್ಲಿ ಮಕ್ಕಳಿಗಿರುವ ರಕ್ತದ ಕಾಯಿಲೆಗಳಾದ ಥ್ಯಾಲಸೀಮಿಯಾ , ಹಿಮೋಫಿಲಿಯಾ , ಸಿಕ್ಕಲ್ ಸೆಲ್ ಡಿಸೀಸ್ ಕೂಡಾ ಇವೆ.ಪಾರ್ಲಿಮೆಂಟಿನಿಂದ ವಿಷಯಗಳು ಪಂಚಾಯತಿ ಮಟ್ಟಕ್ಕೆ ತಲುಪಿ ಅಗತ್ಯವಿರುವವರಿಗೆ ಮುಟ್ಟಲು ನಮ್ಮ ದೇಶದಲ್ಲಿ ಬಹಳ ಸಮಯ ಹಿಡಿಯುತ್ತದೆ.

4. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಥ್ಯಾಲಸೀಮಿಯಾದಿಂದ ಬಳಲುವ ಮಕ್ಕಳು disability certificate ಮಾಡಿಸಬಹುದು. 
ಕಳೆದ ವಾರವಷ್ಟೆ ಕರಿಕೆಯ ಮಗುವೊಂದಕ್ಕೆ ಮಾಡಿಕೊಡಲಾಯಿತು.ಬನ್ನಿ ನಿಮ್ಮ ಹಕ್ಕನ್ನು ಪಡೆಯಿರಿ..ಇದರ ಪ್ರಯೋಜನಗಳು ಅನೇಕ.. 
ಸ್ಕಾಲರ್ಶಿಪ್
ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ
ಇನ್ಕಮ್ ಟ್ಯಾಕ್ಸ್ ರಿಬೇಟ್
ಅರ್ಥಿಕ ಸಹಾಯ
ಉಚಿತ ಪ್ರಯಾಣ ಇತ್ಯಾದಿ ಸವಲತ್ತುಗಳಿವೆ..
ನಮ್ಮ ದೇಶದಲ್ಲಿ ಥ್ಯಾಲಸೀಮಿಯಾದಿಂದ ಬಳಲುವವರು ಉನ್ನತ ಹುದ್ದೆಗಳಿಗೆ ಹೋದ ನಿದರ್ಶನಗಳೂ ಇದೆ..

ಇಷ್ಟು ಬೋರಿಂಗ್ ಪೋಸ್ಟನ್ನು ಇಲ್ಲಿಯ ತನಕ ಓದುವ ಶ್ರಮವನ್ನು ನೀವು ತಗೆದುಕೊಂಡದ್ದೇ ಆದಲ್ಲಿ ಇದನ್ನು ದಯವಿಟ್ಟು ಶೇರ್ ಮಾಡಿ.. ಜಿಲ್ಲೆಯಲ್ಲಿರುವ ಪ್ರತಿಯೊಂದು ಥ್ಯಾಲಸೀಮಿಯಾ ಮಗುವಿನ ತಂದೆ ತಾಯಿಗೆ ಈ ವಿಷಯ ತಲುಪಲಿ..

ನಿಮ್ಮ
Maj Kushvanth Kolibailu
EXCLUSIVE PHOTOS
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa Srinivas ಬಾಸ್ ಅವರು  ತಮ್ಮ ಆತ್ಮೀಯ ಗೆಳೆಯ ಮನೆಗೆ ಆಗಮಸಿದಾಗ ಕ್ಲಿಕ್ ಮಾಡಿದ ಅದ್ಭುತವಾದ ಫೋಟೋ
#😍
"ಮದಗಜ" ಚಿತ್ರತಂಡವು  ಮೈಸೂರು ಬಳಿ ಇರುವ ಕೆ ಆರ್ ಎಸ್ ಹಿನ್ನೀರಿನ ಪ್ರದೇಶದಲ್ಲಿ  ಚಿತ್ರೀಕರಣ ನಡೆಸುತ್ತಿರುವಾಗ ... ಸರ್ಪೈಸ್ ಆಗಿ ಭೇಟಿ ಕೊಟ್ಟು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ನಮ್ಮ ಪ್ರೀತಿಯ  ಚಾಲೆಂಜಿಂಗ್ ಸ್ಟಾರ್ "ದರ್ಶನ್" ಬಾಸ್.
#Boss Boss #DBoss
ಕೆಜಿಎಪ್

ಕೆಜಿಎಫ್ ನಗರದ ಮಾರಿಕುಪ್ಪಂ ಪೋಲೀಸ್ ವ್ಯಾಪ್ತಿಯ ಕೃಷ್ಣಗಿರಿ  ಲೈನ್ ನ ಜೋಸೆಫ್ ರವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಬೆಳೆದಿರುವ ಒಟ್ಟು 149 ಗಾಂಜಾ ಗಿಡಗಳನ್ನು ಜಪ್ತುಪಡಿಸಿ ಆರೋಪಿಗಳನ್ನು ಬಂದಿಸಲಾಗಿದೆ.

ವಶ ಪಡಿಸಿಕೊಂಡಿರುವ ಗಾಂಜಾ  ಮೌಲ್ಯ  4 ಲಕ್ಷ ರೂಗಳಾಗಿರುತ್ತದೆ. 

ಈ ಧಾಳಿಯಲ್ಲಿ  ಕೆ.ಜಿಎಫ್ ತಹಸಿಲ್ದಾರರಾದ ರಮೇಶ್ ರವರು ,ಕೆ. ಜಿ.ಎಫ್ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎ.ಪಿ ನರಸಿಂಹಮೂರ್ತಿ‌. ಬಂಗಾರಪೇಟೆ ವಲಯದ ಅಬಕಾರಿ ನಿರೀಕ್ಷಕರಾದ ಸುಮ. ಎಂ.ಆರ್ ಕೆಜಿಎಫ್ ನ ನಿರೀಕ್ಷಕರಾದ ತಿಮ್ಮಾರೆಡ್ಡಿ. ಜಿಲ್ಲಾ ಇಐಬಿಯ ನಿರೀಕ್ಷಕರಾದ ಕೆ.ಸಿ.ರಾಮು ರವರು ಉಪ ನಿರೀಕ್ಷಕರಾದ ಶಿವಶಂಕರ್, ವೇಣುಗೋಪಾಲ್ ಸಿಬ್ಬಂದಿಯಾದ ಮಂಜುನಾಥ, ಹನುಮಂತ ವಾಗ್ಮೋರೆ, ಅಂಬಾಸಾ ಪವಾರ, ಲಕ್ಷ್ಮಣ ಮಾದಾರ,  ನವೀನ್ , ನರಸಿಂಹ  ಮೂರ್ತಿ ವಾಹನ ಚಾಲಕರಾದ ಸುಬ್ರಮಣಿ, ಅಶೋಕ್, ಲೋಕೇಶ್ ಭಾಗವಹಿಸಿದ್ದರು
ಖ್ಯಾತ ಹಿನ್ನೆಲೆ ಗಾಯಕ ಮತ್ತು ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ (ಎಸ್‌ಪಿಬಿ) ಅವರ ಆರೋಗ್ಯ ಚಿಂತಾಜನಕ.
ಆಗಸ್ಟ್ 5 ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಎಸ್‌ಪಿಬಿ ಆರೋಗ್ಯ ಇದೀಗ ಅತ್ಯಂತ ಗಂಭೀರವಾಗಿದೆ ಎಂದು ಗುರುವಾರ ಚೆನ್ನೈನ ಎಂಜಿಎಂ ಆಸ್ಪತ್ರೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Sandalwood Popular actor #RocklineSudhakar Passed Away today due to cardiac arrest.

ಪುಷ್ಕರ್‌ ಮಲಿಕಾರ್ಜುನಯ್ಯ ನಿರ್ಮಾಣದ 'ಶುಗರ್‌ಲೆಸ್‌' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸುಧಾಕರ್‌ ಮೇಕಪ್‌ ಹಾಕಿಕೊಳ್ಳುತ್ತಿದ್ದಾಗ, ಕುಸಿದು ಬಿದ್ದಿದ್ದಾರೆ, ಸುಮಾರು 10 ಗಂಟೆಗೆ ನಿಧನರಾಗಿದ್ದಾರೆ. ಬೆಂಗಳೂರು ಕಮಲನಗರ ನಿವಾಸಿಯಾಗಿದ್ದ ಸುಧಾಕರ್‌ ಎರಡು ತಿಂಗಳುಗಳ ಹಿಂದೆ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರು.

ಸ್ಯಾಂಡಲ್‌ವುಡ್‌ ಸ್ಟಾರ್‌ ನಟರ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದ ಸುಧಾಕರ್‌ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು 'ಪಂಚರಂಗಿ', 'ಅಧ್ಯಕ್ಷ', 'ಅಜಿತ್', 'ನಾ ಕೋಳಿಕೇರಂಗ'.


ಹಿರಿಯ ಸಿನಿ ಕಲಾವಿದರಾದ ರಾಕ್ ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.. 🙏
ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ.  ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.  

ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. 
ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. 
ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ. 
ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. 

ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಮೈಸೂರು: ಮೈಸೂರು ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ 'ಡಾ.ವಿಷ್ಣುವರ್ಧನ್ ಸ್ಮಾರಕ ಭವನ' ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ವೇದಿಕೆ ಮೂಲಕ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.

ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಮುಡಾ ಆಧ್ಯಕ್ಷ ಎಚ್.ವಿ.ರಾಜೀವ್ ಪಾಲ್ಗೊಂಡರು.

ಐದು ಎಕರೆ ಜಮೀನಿನಲ್ಲಿ ಸ್ಮಾರಕ ಭವನ ನಿರ್ಮಾಣವಾಗಲಿದೆ. ಸರ್ಕಾರ 2010-11 ರ ಬಜೆಟ್ ನಲ್ಲಿ ₹11 ಕೋಟಿ ಅನುದಾನ ಮೀಸಲಿರಿಸಿತ್ತು. ಜಾಗಕ್ಕೆ ಸಂಬಂಧಿಸಿದಂತೆ ತಕರಾರು ಇದ್ದ ಕಾರಣ ನಿರ್ಮಾಣ ಕಾರ್ಯ ತಡವಾಗಿದೆ.
ಚಿರು ಸರ್ಜಾ ನಮ್ಮನ್ನೆಲ್ಲ ಆಗಲಿ ನೂರು ತಿಂಗಳೇ ಕಳೆದಿದೆ. ಚಿರು ಅಗಲಿಕೆಯ ಸಮಯದಲ್ಲಿ ಮೇಘನ ರಾಜ್ ಅವರು 5 ತಿಂಗಳ ತುಂಬು ಗರ್ಭಿಣಿ. ಸದ್ಯ ಮೇಘನ ರಾಜ್ ಅವರು 8 ತಿಂಗಳ ಗರ್ಭಿಣಿ ಆಗಿದ್ದು ಮುಂದಿನ ತಿಂಗಳು ಅಂದರೆ October 10ಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮೇಘನ ರಾಜ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಕಳೆದ ವಾದ ಇಂದ್ರಜಿತ್ ಲಂಕೇಶ್ ಅವರು ಚಿರು ಮೇಲೆ ಕೆಲವು ಆರೋಪಗಳನ್ನು ಮಾಡಿ, ಭಾರಿ ಚರ್ಚೆಗೆ ಕಾರಣ ವಾಗಿದ್ದರು. ಈ ಸಮಯದಲ್ಲಿ ನಮ್ಮ ಮೇಘನ ರಾಜ್ ಅವರ ಮಾನಸಿಕ ಸ್ಥಿತಿ ಕೊಂಚ ಕುಂತಿತ್ತು ಎನ್ನಲಾಗಿದೆ.

ಮುಂದಿನ ತಿಂಗಳು October ನಲ್ಲಿ ನಮ್ಮ ಮೇಘನ ರಾಜ್ ಅವರು ಮುದ್ದಾದ ಮಗುವಿಗೆ ಜನ್ಮ ನೀಡಲಿದ್ದಾರೆ. ಮೇಘನ ರಾಜ್ ಅವರಿಗೆ ಒಳ್ಳೆದ್ ಆಗಲಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೆಜನ್ನು ಲೈಕ್ ಮಾಡಿ ಶೇರ್ ಮಾಡಿ.


ಚಿರು ಸರ್ಜಾ ನಮ್ಮನ್ನೆಲ್ಲ ಆಗಲಿ ನೂರು ತಿಂಗಳೇ ಕಳೆದಿದೆ. ಚಿರು ಅಗಲಿಕೆಯ ಸಮಯದಲ್ಲಿ ಮೇಘನ ರಾಜ್ ಅವರು 5 ತಿಂಗಳ ತುಂಬು ಗರ್ಭಿಣಿ. ಸದ್ಯ ಮೇಘನ ರಾಜ್ ಅವರು 8 ತಿಂಗಳ ಗರ್ಭಿಣಿ ಆಗಿದ್ದು ಮುಂದಿನ ತಿಂಗಳು ಅಂದರೆ October 10ಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮೇಘನ ರಾಜ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಕಳೆದ ವಾದ ಇಂದ್ರಜಿತ್ ಲಂಕೇಶ್ ಅವರು ಚಿರು ಮೇಲೆ ಕೆಲವು ಆರೋಪಗಳನ್ನು ಮಾಡಿ, ಭಾರಿ ಚರ್ಚೆಗೆ ಕಾರಣ ವಾಗಿದ್ದರು. ಈ ಸಮಯದಲ್ಲಿ ನಮ್ಮ ಮೇಘನ ರಾಜ್ ಅವರ ಮಾನಸಿಕ ಸ್ಥಿತಿ ಕೊಂಚ ಕುಂತಿತ್ತು ಎನ್ನಲಾಗಿದೆ.
ಬೇರೆ ಸ್ಟಾರ್ ಗಳಿಗೆ ಟಾಂಗ್ ಕೊಡೋ ಡೈಲಾಗ್ ನನಗೆ ಬರೀಬೇಡಿ ಎಂದ ಡಿ ಬಾಸ್ !
 
ನಾನು ಮೆಜೆಸ್ಟಿಕ್ ಸಿನಿಮಾ ನೋಡಿದಾಗಿನಿಂದಲೇ ದರ್ಶನ್ ಅವರಿಗೆ ಫ್ಯಾನ್. ಆವಾಗ ನಾನು ಫಸ್ಟ್ ಪಿ.ಯು.ಸಿ ಯಲ್ಲಿದ್ದೆ.‌ ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ಜನ ಸೇರ್ಕೊಂಡು ಮಾಡ್ತಾ ಇದ್ರು.  ಅದಾದಮೇಲೆ ದರ್ಶನ್ ಅವರ ಎಲ್ಲಾ ಫಿಲ್ಮ್ 50 ಚಿತ್ರಗಳನ್ನು ಕೂಡಾ ನೋಡಿದ್ದೀನಿ. ಅದರಲ್ಲಿ ಕೂಡಾ, 45 ಚಿತ್ರಗಳನ್ನು ಮೊದಲ ವಾರವೇ ನೋಡಿದ್ದೀನಿ.
ದರ್ಶನ್ ಅವರನ್ನು ನಾನು ಮೊದಲು ಮೀಟ್ ಆಗಿದ್ದು'ದಾಸ' ಚಿತ್ರದ ಚಿತ್ರೀಕರಣದ ವೇಳೆ. ಆವಾಗ ನಾನು ದ್ವಿತೀಯ ಪಿಯುಸಿ ಯಲ್ಲಿದ್ದೆ. ನಮ್ಮ ಕಾಲೇಜ್ ಹತ್ರ ರಾಮ ಮಂದಿರದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಆಮೇಲೆ ಕೂಡಾ ದರ್ಶನ್ ಅವರ ಬಹಳಷ್ಟು ಚಿತ್ರಗಳ ಶೂಟಿಂಗ್ ಅಲ್ಲೇ ನಡೆಯುತ್ತಿತ್ತು. ಮೆಜೆಸ್ಟಿಕ್ ಸಾಂಗ್ ಅಲ್ಲೇ ಶೂಟಿಂಗ್ ಆಗಿದ್ದು. ಅಲ್ಲಿ ಹೋಗಿದ್ದೆ ನಾನು. ಕಾಲೇಜು ಮುಗಿಸ್ಬಿಟ್ಟು ಅವರನ್ನು ಭೇಟಿಯಾಗಿ ಮಾತಾಡಿದ್ದೆ. ಶ್ರೀರಾಮ್ ಪುರದಿಂದ ಒಂದಷ್ಟು ಮಂದು ಸ್ಲಂ ಹುಡುಗರು ಬಂದಿದ್ದರು. ಆವಾಗ ಮೊಬೈಲ್ ಕ್ಯಾಮೆರಾ ಇರಲಿಲ್ಲ. ಯಾರೋ ಒಬ್ಬರು ಕ್ಯಾಮೆರಾ ತಗೊಂಡು ಬಂದು ಫೊಟೋಸ್ ತಗೋತಾ ಇದ್ರು. ನಾನು ದರ್ಶನ್ ಅವರಲ್ಲಿ ' ನಮ್ಮ ಪ್ರೀತಿಯ ರಾಮು' ಯಾವಾಗ ರಿಲೀಸ್ ಅಂತ ಕೇಳಿದ್ದೆ.  ನಿಜ ಹೇಳಬೇಕೆಂದರೆ  ಆ ಕ್ಷಣ ಅವರು ನನ್ನ ಟಕ್ಕಂತ ನನ್ನ ಕಡೆ ನೋಡಿದ್ರು. ಇದೇನು ಎಲ್ಲಾರು ಬಂದು ಮಾಸ್ ಫಿಲ್ಮ್ ಬಗ್ಗೆ ಕೇಳ್ತಾರೆ ಇವನೇನು ಈ ಸಿನಿಮಾ ಬಗ್ಗೆ ಕೇಳ್ತಾ ಇದ್ದಾನೆ ಎಂದು. 'ಅದು ನೆಕ್ಸ್ಟ್ ಆಗುತ್ತೆ' ಅಂದ್ರು. ಆಮೇಲೆ ಅವರು ಹೇಳಿದ ಹಾಗೆ 'ದಾಸ' ಬಂದ ಒಂದು ವಾರದ ವ್ಯತ್ಯಾಸದಲ್ಲಿ ಅದು ಕೂಡಾ ಬಿಡುಗಡೆ ಆಯಿತು ಅಂತ ಅನ್ಸುತ್ತೆ. 
ಅದಾದ ಮೇಲೆ ಮತ್ತೆ ಭೇಟಿಯಾಗಿದ್ದು ಇಂಡಸ್ಟ್ರಿ ಗೆ ಬಂದ ಮೇಲೆ. 

ಜಗ್ಗೇಶ್ ಜೊತೆ 'ಎದ್ದೇಳು ಮಂಜುನಾಥ' ಚಿತ್ರಕ್ಕೆ ಕೆಲಸ ಮಾಡ್ತಾ ಇದ್ನಲ್ಲ..ನಾನು ಗುರುಪ್ರಸಾದ್ ಅವರಿಗೆ ಅಸಿಸ್ಟೆಂಟ್ ಆಗಿದ್ದೆ. ಆವಾಗ ದರ್ಶನ್ ಅವರದು 'ಅರ್ಜುನ' ಚಿತ್ರ ರಿಲೀಸ್ ಆಗಿತ್ತು ಅಂತ ಕಾಣ್ಸುತ್ತೆ. ರಿಲೀಸ್ ದಿನ ಶೂಟಿಂಗ್ ಗೆ ರಜ ಹಾಕಿ ಮೂವಿಗೆ ಹೋಗ್ಬಿಟ್ಟಿದ್ದೆ. ಆವಾಗ ಜಗ್ಗೇಶ್ ಸರ್ ಕೇಳಿದ್ದಾರೆ ' ಎಲ್ಲಿ ದ್ದಾನೆ ಆ ಹುಡುಗ..ಡೈಲಿ ಕ್ಲ್ಯಾಪ್ ಹೊಡೆತಿದ್ನಲ್ಲ?' ಅಂತ. ಅದಕ್ಕೆ ಗುರು ಸರ್ ಅವರಿಗೆ ಹೇಳಿದ್ದಾರೆ. 'ದರ್ಶನ್ ಫ್ಯಾನ್ ಸರ್ ಅವನು...ತುಂಬಾ ತಿಕ್ಲು ಅಂತ!
ನೀವು ನಂಬಲ್ಲ 'ಎದ್ದೇಳು ಮಂಜುನಾಥ'  ಚಿತ್ರ ಆದ ಮೇಲೆ  ಸುಮಾರು 4 ವರ್ಷಗಳ ಬಳಿಕ ಜಗ್ಗೇಶ್ ಸರ್ ಸಿಕ್ಕಿದ್ರು. ಅಚಾನಕ್  ಆಗಿ ' ದರ್ಶನ್ ಸಿಕ್ಕಿದ್ನಪ್ಪ ' ಹೋಗಿ ಮೀಟ್ ಮಾಡ್ಕೊಂಡು ಬಾ' ಅಂದ್ರು! ಅವರು ಆಗ ದರ್ಶನ್ ಜೊತೆಗೆ 'ಅಗ್ರಜ' ಅಂತ ಮೂವಿ ಮಾಡುತ್ತಿದ್ರು. ಅಲ್ಲಿ ಜಗ್ಗೇಶ್ ಸರ್ ಮತ್ತು ದರ್ಶನ್ ಅವರಲ್ಲಿ ಎಲ್ಲಾನೂ ಹೇಳಿದ್ದರು. 'ಗುರು ಹತ್ರ ಒಬ್ಬ ಹುಡುಗ ಇದ್ದ.. ನಿನ್ನ ಫ್ಯಾನ್' ಅಂತ. ಆದರೆ ನಾನು ಆಮೇಲೆ ಅವರನ್ನು ಮೀಟಾಗಿದ್ದು ಮಾತ್ರ 'ಸಾರಥಿ' ಫಿಲ್ಮ್ ಶೂಟಿಂಗ್ ಟೈಮಲ್ಲಿ. ಶೂಟಿಂಗ್  ಸ್ಪಾಟ್ ಗೆ ಹೋಗಿ, 'ಜಗ್ಗೇಶ್ ಸರ್ ನನ್ನನ್ನು ನಿಮ್ಮನ್ನು ಮೀಟಾಗೋಕೆ ಹೇಳಿದ್ರು' ಅಂದೆ. ದರ್ಶನ್ ' ಓಹ್ ಸರಿ..ಮೊದಲು ಊಟ ಮಾಡು..' ಅಂದ್ರು. ಊಟ ಬೇಡ ಸರ್ ಅಂದೆ ನಾನು. " ಸಿನಿಮಾದಲ್ಲಿ ಮೊದಲು ಊಟಾನೇ ಗಟ್ಟಿ ಮಾಡಬೇಕಾಗಿರೋದು. ಫಸ್ಟ್ ಊಟ ಬೇಡ ಅನ್ಬಾರ್ದು" ಅಂದ್ರು! ಶೂಟಿಂಗ್ ಬಿಡದಿ ಫಿಲ್ಮ್ ಸಿಟಿಯಲ್ಲಿ ಆಗ್ತಾ ಇತ್ತು. ಅವರ ಪಕ್ಕದ ಟೇಬಲ್ ನಲ್ಲೇ ಕುಳಿತುಕೊಂಡು ಊಟ ಮಾಡಿದೆ. ಅದಾದ ಮೇಲೆ 'ಒಡೆಯ' ಶೂಟಿಂಗ್ ನಲ್ಲಿ ಮೀಟ್ ಆಗಿದ್ದು. ಒಡೆಯ ಚಿತ್ರದಲ್ಲಿ ನಾನೇ ಸಂಭಾಷಣೆ ಬರೆದೆ. " ಬಿಲ್ಡಪ್ ತರಹ ಬರೆಯಬಾರದು. ಅವರವರಿಗೆ ಎಲ್ಲ ಟಾಂಗ್ ಕೊಡೋ ತರಹ ಬರೀಬಾರ್ದು" ಅಂದ್ರು. "ತುಂಬಾ ಹುಷಾರಾಗಿ ಬರೆಯಿರಿ" ಎಂದು ಅವರು ಹೇಳಿದಾಗ ಸೆಟೆಲ್ಡ್ ಆಗಿ ಬರೇತೀನಿ. ಆದರೆ ನಿಮ್ಮ ಬಗ್ಗೆ ಸ್ವಲ್ಪ ಹೈಲೈಟ್ ಮಾಡಿ ಬರೀತೀನಿ' ಅಂದೆ. ಅದೂ ಬೇಡ ಅಂದಿದ್ರು ! ಸೆಕೆಂಡ್ ಹಾಫಲ್ಲೆಲ್ಲ ಸೆಟಲಾಗೇ ಬರೆದಿದ್ದೀನಿ. ಆದ್ರೆ ಫಸ್ಟಲ್ಲಿ ಬಿಲ್ಡಪ್ ಇದ್ದೇ ಇದೆ. ನಾನೇ ಅವರ ಫ್ಯಾನಾಗಿರುವಾಗ ಸ್ವಲ್ಪನಾದ್ರೂ ಬಿಲ್ಡಪ್ ಕೊಡದೇ ಇರೋಕಾಗೋತ್ತಾ?! ಆದರೆ ಬೇರೆ ಸ್ಟಾರ್ ಗಳಿಗಂತೂ ಟಾಂಗ ಕೊಟ್ಟಿಲ್ಲ. ವಿಚಿತ್ರ ಏನೆಂದರೆ ಕೆಲವೊಮ್ಮೆ ನಾವು ಬರೆದಾದ ಮೇಲೆ ನೋಡ್ತಾ ನೋಡ್ತಾ ಫ್ಯಾನ್ಸ್ ಅದನ್ನು ಇನ್ನೊಬ್ಬ ಸ್ಟಾರ್ ಗೆ ಕನೆಕ್ಟ್ ಮಾಡಿ ಬಿಡ್ತಾರೆ. ಆ್ಯಕ್ಚುವಲಿ ನಾನು ಪೊಗರಿನಲ್ಲಿ ಯಾರಿಗೂ ಟಾಂಗ್ ಕೊಡೋಕೆ ಏನೂ ಬರೆದಿರಲಿಲ್ಲ. ಆದರೆ ಆಮೇಲೆ ಜನ‌ ಕಲ್ಪನೆ ಮಾಡಿಕೊಂಡರು. ಈಗ 'ಯಜಮಾನ' ದಲ್ಲಿ ಆನೆ, ಕ್ಯಾಡಬರೀಸ್ ಅಂತೆಲ್ಲ ಬಂತಲ್ಲ? ನಿಜವಾಗಿ ಅದಕ್ಕೆ ಬೇರೆ ಉದ್ದೇಶ ಇರಲ್ಲ ಅದರಲ್ಲಿ. ಜನಗಳು ಕನೆಕ್ಟ್ ಮಾಡಿ ಬಿಡ್ತಾರೆ. ಸೆಕೆಂಡ್ ಹಾಫ್ ನಲ್ಲಿ ಒಂದು ಸೀನ್ ನೋಡ್ಬಿಟ್ಟು ಬೇಜಾರು ಮಾಡ್ಕೊಂಡ್ರು". ಏನಕ್ಕೆ ಇಷ್ಟೊಂದಯ ಬಿಲ್ಡಪ್ ಕೊಟ್ಟಿದ್ದೀರಾ, ಅದನ್ನು ಕಟ್ ಮಾಡಿ" ಅಂತ ಫೋನ್ ಮಾಡಿ ಹೇಳಿದ್ರು. ಆಮೇಲೆ ಚೇಂಜ್ ಮಾಡಿದ್ವಿ.
ನನಗೆ ದರ್ಶನ್ ಸರ್ ಏನಕ್ಕೆ ಇಷ್ಟ ಅಂದ್ರೆ, ಒಂದು ಮಾಸ್ ಸೆಲೆಬ್ರೇಶನ್ ಅಂತ ನಮ್ಮ ಜನರೇಷನ್ ಗೆ ಅಂದರೆ ನಾವು ಸಿನಿಮಾ ‌‌ನೋಡೋಕೆ ಸ್ಟಾರ್ಟ್ ಮಾಡಿದ್ಮೇಲೆ ಇರೋದೇ ದರ್ಶನ್ ಅವರ ಚಿತ್ರಗಳ ರಿಲೀಸ್. ಹಿಂದಿನವರಿಗೆ ಅಣ್ಣಾವ್ರ ಸಿನಿಮಾಗಳಿದ್ದವು. ಆದರೆ ನಾನು ಆ ಕ್ರೇಜ಼್ ನೋಡಿದ್ದೇ ದರ್ಶನ್ ಸರ್ ಸಿನಿಮಾಗಳ ಮೂಲಕ. ಅವರ ಮೊದಮೊದಲ ಸಿನಿಮಾಗಳ ಸಮಯದಲ್ಲೇ ವಿಜಯನಗರ ಸುತ್ತಮುತ್ತ ಹೋದರೆ ಗೋಡೆ ಮೇಲೆಲ್ಲಾ ಪೋಸ್ಟರ್ ಹಾಕಿರೋರು. ಅದರ ಮೇಲೆ ಹಾರ ಹಾಕೋರು! ಆ ಸಿನಿಮಾ ಕ್ರೇಜ಼್  ಇಷ್ಟ ನನಗೆ. ಏನೇ ಆದರೂ ಮಾಸ್ ಸಿನಿಮಾ ಸೆಲೆಬ್ರೇಶನ್ ಖುಷಿ. ಅವರ ಬರ್ತ್ ಡೇ ದಿನಾನೂ ಅಷ್ಟೇ, ಫ್ಯಾನ್ಸ್ ಸಂಭ್ರಮ‌ ನೋಡೋಕೆ ಮನೆ ಹತ್ರ ಹೋಗುತ್ತೇನೆಯೇ ಹೊರತು, ಅವರನ್ನು ಮೀಟಾಗೋಕೆ ಹೋಗಲ್ಲ!
 
ಮೆಚ್ಚಿನ ಚಿತ್ರಗಳು ಅವರ ಸಿನಿಮಾಗಳಲ್ಲಿ ಮೆಜೆಸ್ಟಿಕ್, ನನ್ನ ಪ್ರೀತಿಯ ರಾಮು, ಗಜ, ದತ್ತ ಸಿನಿಮಾಗಳು ನನಗೆ ತುಂಬಾ ಇಷ್ಟ. ಅಲ್ಮೋಸ್ಟ್ ಅವರ ಯಾವ ಸಿನಿಮಾಗಳು ಕೂಟ ನಿರಾಸೆ ಮಾಡಿಲ್ಲ. ಅವರ ಎಂಟ್ರಿ, ಲುಕ್ಕೇ ಮಾಸ್.
ಮುಂದಿನ ಭಾಗದಲ್ಲಿ ಚಿತ್ರರಂಗದ ಮತ್ತೋರ್ವ ಗಣ್ಯ ವ್ಯಕ್ತಿ ದರ್ಶನ್ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
.

ಹಾಸನದಿಂದ 38 ಕಿ.ಮೀ.ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ.  ಬೇಲೂರು ಹಿಂದೆ ಹೊಯ್ಸಳರ ರಾಜಧಾನಿಯಾಗಿದ್ದಿತು.  ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು.  ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ಉದಾಹರಣೆಗಳಲ್ಲೊಂದಾದ ಚೆನ್ನಕೇಶವ 
ದೇವಸ್ಥಾನದಿಂದಾಗಿ ಈ ಪಟ್ಟಣವು ಪ್ರಸಿದ್ಧವಾಗಿದೆ.  ಕ್ರಿ.ಶ.1116ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ ವಿರುದ್ಧ ಸಾಧಿಸಿದ ವಿಜಯದ ದ್ಯೋತಕವಾಗಿ ಈ ದೇಗುಲವನ್ನು ನಿರ್ಮಿಸಿ, ವಿಜಯ ನಾರಾಯಣ ಎಂದು ಕರೆದನು. 

ದೇವಸ್ಥಾನದ ವಾಸ್ತು ಶಿಲ್ಪ
                ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಗಾಗಿ ಕಟ್ಟಡಗಳಿಗೆ ಹೊಯ್ಸಳರು ಮೃದು ಬಳಪದ ಕಲ್ಲನ್ನು ಬಳಸಿದ್ದರು.  ದೇವಸ್ಥಾನವು ವಿಜಯನಗರ ಶೈಲಿಯಲ್ಲಿ ಗೋಪುರದಿಂದ ಕೂಡಿದ ಒಂದು ದೊಡ್ಡ ಪ್ರಾಕಾರದಿಂದ ಸುತ್ತುವರೆದಿದ್ದು, ದೇವಸ್ಥಾನವು ಒಂದು ಜಗುಲಿಯ ಮೇಲೆ ನಿಂತಿದ್ದು, ಒಂದು ದೊಡ್ಡ ಕರಂಡಕದಂತೆ ಕಾಣುತ್ತದೆ.  ಈ ಮೇರುಕೃತಿಯಲ್ಲಿ ಶಿಲ್ಪಕಲಾವಿದನ ನೈಪುಣ್ಯ ಮತ್ತು ಕೈಚಳಕ ನಿಜವಾಗಿಯೂ ಆಶ್ಚರ್ಯಕರವಾಗಿದೆ.

ಶಿಲ್ಪಕಲೆಯ ಅಸಾಮಾನ್ಯತೆ
ಚೆನ್ನಕೇಶವ ದೇವಸ್ಥಾನವು ಕಲ್ಲಿನಲ್ಲಿ ಮಾಡಬಹುದಾದ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಗೆ ಕಲಾ ನೈಪುಣ್ಯತೆಗೆ ಉತ್ತಮ ಉದಾಹರಣೆಯಾಗಿದೆ.  ಈ ದೇವಸ್ಥಾನದಲ್ಲಿ 80ಕ್ಕೂ ಹೆಚ್ಚು ಮದನಿಕೆಯರ ಶಿಲ್ಪಗಳು, ನಾಟ್ಯ, ಬೇಟೆ, ಮರಗಳ ಕೆಳಗೆ ನಿಂತಿರುವುದು, ಇತ್ಯಾದಿಗಳು ಇವೆ. ಕೆತ್ತನೆಯಿಂದ ಕೂಡಿರುವ ನವರಂಗದ ಕಂಬಗಳ ಮೇಲೆ ಕೆತ್ತಲಾಗಿರುವ 4 ಮದನಿಕಾ ವಿಗ್ರಹಗಳು (ಆಕರ್ಷಕವಾದ ಸೊಗಸಾದ ನಾಟ್ಯ ಭಂಗಿಗಳು) ಹೊಯ್ಸಳ ಶೈಲಿಯ ಅನುಪಮ ನಿರ್ಮಿತಿಗಳು.  ಗರ್ಭಗೃಹವು ನಕ್ಷತ್ರಾಕಾರವಾಗಿದ್ದು, ಹಗಲಿನ ಬೇರೆ ಬೇರೆ ಹೊತ್ತಿನ ಗರ್ಭಗೃಹದ ಅಂಕುಡೊಂಕಾದ ಗೋಡೆಗಳ ಮೇಲೆ ಬಿದ್ದ ಬೆಳಕು ವಿಷ್ಣುವಿನ 24 ರೂಪಗಳನ್ನು ಬೇರೆ ಬೇರೆಯಾಗಿ ಕಾಣುವಂತೆ 
ಮಾಡುತ್ತದೆ.   ಕಲ್ಯಾಣ ಚಾಲುಕ್ಯರ ಕಲಾಕೇಂದ್ರವಾದ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಿಂದ ಬಂದ ತಂದೆ ಮತ್ತು ಮಗನಾದ ದಾಸೋಜ ಮತ್ತು ಚವನ ಎಂಬ ಕುಶಲಕಲಾಕಾರರಿಂದ ಈ ದೇವಸ್ಥಾನವು ಕಟ್ಟಲ್ಪಟ್ಟಿದೆ.  ನವರಂಗದಲ್ಲಿರುವ ಶಿಲ್ಪಗಳ ಪೈಕಿ ದರ್ಪಣಸುಂದರಿ ಶಿಲ್ಪಕ್ಕೆ, ರಾಜ ವಿಷ್ಣುವರ್ಧನನ ಪತ್ನಿಯಾದ ಪರಮಸುಂದರಿ ಶಾಂತಲಾದೇವಿಯು ರೂಪದರ್ಶಿಯಾಗಿದ್ದಳು ಎನ್ನಲಾಗುತ್ತದೆ.  ಈ ಒಂದೇ ಕೆತ್ತನೆಯು ದೇವಸ್ಥಾನದ ಸೌಂದರ್ಯವನ್ನು ಹಾಗೂ ಭವ್ಯತೆಯನ್ನು ಎತ್ತಿ ತೋರಿಸುತ್ತದೆ.  ಕಪ್ಪೆ ಚೆನ್ನಿಗರಾಯ, ಸೌಮ್ಯನಾಯಕಿ, ಆಂಡಾಳ್ ಮತ್ತು ಇನ್ನಿತರೆ ವೈಷ್ಣವ ಅಭಿವ್ಯಕ್ತಿಗಳು ಈ ದೇವಸ್ಥಾನವನ್ನು ಸುತ್ತುವರಿದಿವೆ. 13ನೇ ಶತಮಾನದ ಪ್ರಸಿದ್ಧ ಕನ್ನಡ ಕವಿ ರಾಘವಾಂಕನದು ಎಂದು ಹೇಳಲಾದ ಒಂದು ಸಮಾಧಿಯು ಬೇಲೂರಿನಲ್ಲಿ ಇದೆ.

Chennakeshava Temple, also called the Vijayanarayana of Belur Temple and the Kesava Temple, is a Hindu temple in the Hassan district of Karnataka state, India. 

It was created in the 12th century in response to a decree by King Vishnuvardhana. It's sculptures are beautifully created and hard to comprehend due to their perfect, glossy finish and micro-carvings as small as a few millimetres. The technology involved in their creation is not understood and the interior sculptures show little or no wear.